Post

ಅಪ್ಪು

ನಿಮ್ಮ ನೋಡುತ ಬೆಳೆದವನು ನಾನು,
ಬಾಲ್ಯದಿಂದ ಅಭಿಮಾನಿಯಾದವನು.

ಬಂದರು ಹಲವಾರು ನಟರು ಪರದೆಯಲ್ಲಿ,
ನೀವು ಮಾತ್ರ ಸ್ಥಿರವಾದಿರಿ ಮನದಲ್ಲಿ.

ನಮಗೇಕೆ ಬೇಕು ಅನ್ಯರ ಪ್ರೇರಕ ಭಾಷಣ?
ನಿಮ್ಮ ಚಿತ್ರಗಳ ಅರ್ಥ ಸಾಕು ನಡೆಸಲು ಜೀವನ.

ನಿಮ್ಮ ನನ್ನ ಜನುಮದಿನ ಒಂದೇ!
ಇದೆಷ್ಟು ವಿಶೇಷ ಸಂಗತಿ ನನಗೆ.

ಎಂದು ಹೇಳಲಿಲ್ಲ ಅಭಿಮಾನಿ ಎಂದು
ತಿಳಿದಿದ್ದೆ ಅವಶ್ಯಕತೆ ಇಲ್ಲವೆಂದು

ಈಗ ಹೇಳುವೆ ನಿವೇ ಅಂದು ಇಂದು ಎಂದೆಂದೂ.

This post is licensed under CC BY 4.0 by the author.