Post

ಹೇಳಿಬಿಡು

ನಿನಗೂ ನಾ ನೆನಪ್ ಆಗ್ತಿನಾ?
ನನಗ ನೀ ನೆನಪ್ ಆದ್ಹಾಂಗ.

ಆ ಕ್ಷಣಗಳ ನಿನ್ನ ಚಿತ್ರಚೌಕಟ,
ಚೊಕ್ಕಟವಾಗಿ ಮೂಡುವಾಗ.

ಆ ಸಮಯದ ಸಂಭಾಷಣೆ,
ಸಂದು ಇಲ್ಲದೆ ಕಂಪಿಸುವಾಗ.

ಆ ದಿನದ ಮಾತುಗಳ ನಡುವೆ,
ನಿನಗಲ್ಲ ಕೆಪಾದುದ ನೆನೆದಾಗ.

ಮತ್ತೆ ಮತ್ತೆ ದಿನದ ಮದ್ಯ;
ಮದ್ಯ ರಾತ್ರಿ ಮಲಗಿದಾಗ.

ಹೇಳಿಬಿಡು;

ನಿನಗೂ ನಾ ನೆನಪ್ ಆಗ್ತಿನಾ?
ನನಗ ನೀ ನೆನಪ್ ಆದ್ಹಾಂಗ.

This post is licensed under CC BY 4.0 by the author.