Post

ಕೈಗೊಂಬೆ

ಕೈಗೊಂಬೆಯಾಗಿರುವೆ ನಿನ್ನ ಕೈಯಿಂದ.
ಆಡಿಸುತ್ತಿರುವರವರು ನಿನ್ನ ನನ್ನಿಂದ.
ನಿನಗಿಂತ ನಿನ್ನ ಬಗ್ಗೆ ನನಗಿದೆ ಮಾಹಿತಿ,
ನಾನು ನಿನ್ನ ಬಳಸುತಿರುವೆ ನೀನನ್ನಲ್ಲ!

ತಂತ್ರಾಗಣದಲ್ಲಿ ಮುಂದೆಹೋದೆ,
ಸಂಬಂಧಗಳಲ್ಲಿ ಹಿಂದೆ ಹೋದೆ.
ಕೆಲಸವನ್ನು ಸುಲಭಮಾಡಲು ಹೋಗಿ,
ಜೀವನವನ್ನೇ ಕಷ್ಟ ಮಾಡಿಕೊಂಡೆ.

ಜಗತ್ತನ್ನು ಹತ್ತಿರ ಮಾಡಿದೆ
ಹತ್ತಿರದವರನ್ನು ದೂರ ಮಾಡಿದೆ
ಎಲ್ಲವನ್ನು ನನಗೆ ಕೀಳುವೆ
ನೀನು ನಿನ್ನನ್ನೇ ಮರೆತಿರುವೆ.

ಕೈಗೊಂಬೆಯಾಗಿರುವೆ ನಿನ್ನ ಕೈಯಿಂದ.
ಆಡಿಸುತ್ತಿರುವರವರು ನಿನ್ನ ನನ್ನಿಂದ.
ನಿನಗಿಂತ ನಿನ್ನ ಬಗ್ಗೆ ನನಗಿದೆ ಮಾಹಿತಿ,
ನಾನು ನಿನ್ನ ಬಳಸುತಿರುವೆ ನೀನನ್ನಲ್ಲ!

This post is licensed under CC BY 4.0 by the author.