ಮಳೆ-ನೀರು
ನಾವು ಯಾವ ತಿಂಗಳಿನಲ್ಲಿ ಹುಟ್ಟಿರುತ್ತೇವೆ ಆ ಕಾಲವನ್ನು ಬಹಳ ಇಷ್ಟಪಡುತ್ತೇವೆ ಎಂದು ಕೇಳಿದ್ದೆ. ಅದು ಸುಳ್ಳು ಅನ್ನಿಸುತ್ತದೆ, ನಾನು ಮಾರ್ಚ್ನ ಬರಗಾಲದಲ್ಲಿ ಹುಟ್ಟಿದವನಾದರೂ ನನಗೆ ಮಳೆಗಾಲ ಇಷ್ಟ, ಮಳೆ ಇಷ್ಟ. ನನಗೆ ಚಳಿ ಅನ್ನಿಸಲಿ, ನಗಡಿ ಆಗಲಿ, ಜ್ವರ ಕೂಡ ಬರಲಿ ನನಗೆ ಮಳೇನಿಲ್ಲಬಾರದು. ಇಂಗ್ಲಿಷ್ ನಲ್ಲಿ ಇದನ್ನು ಪ್ಲುವಿಯೋಫೈಲ್ ಅಥವಾ ಮಳೆ ಪ್ರೇಮಿ ಯೆನ್ನುವರು.
ಬೇಸಿಗೆಯಲ್ಲಿ ಭೂಮಿಯ ಕಾವಿಗೆ ಸಂಜೇಬರುವ ಮಳೆಯಂತೂ ಜೀವದಲ್ಲಿ ಜೀವತುಂಬುತ್ತದೆ.
ನನ್ನ ಈ ಮಳೆಯ ಮೇಲಿನ ಪ್ರೀತಿಗೆ ಕಾರಣ ಇರಬಹುದು, ಮಳೆ ಎಂದರೆ ನೀರು, ನೀರು ಎಂದರೆ ಜೀವನ. ಈ ಭೂಮಿ , ಸಕಲ ಜೀವಿಗಳು ಎಲ್ಲವೂ ನೀರಿನ ಮೇಲೆ ಅವಲಂಬಿತವಾಗಿವೆ ಮತ್ತು ಭೂಮಿಯ ಮೇಲೆ ಮೊದಲ ಜೀವಿಗಳು ಹುಟ್ಟಿದ್ದು ನೀರಿನಲ್ಲೇ ಹೊರತು ನೆಲದಮೇಲಲ್ಲ. ಅದೇರೀತಿ ಸಿ . ವಿ . ರಾಮನ್ ಅವರು ನೀರನ್ನು ಜೀವಿಗಳ ಅಮೃತ ಎಂದು ಕರೆದಿದ್ದಾರೆ.
ಮಳೆಯಬಗ್ಗೆ ನಮ್ಮ ಹಿರಿಯರ ಒಂದು ಗಾದೆಮಾತಿದೆ “ಮಳೆಬಂದರೆ ಕೇಡಿಲ್ಲ, ಮನಿಮಗಾ ಉಂಡರೆ ಕೇಡಿಲ್ಲ”. ಅಂದರೆ, ಮಳೆಬಂದರೆ ಏನು ನಷ್ಟವಿಲ್ಲ ಮನೆಯ ಮಗ ಊಟಮಾಡಿದರೆ ಏನು ನಷ್ಟವಾಗುವುದಿಲ್ಲ. ಹೀಗೆ ಮಳೆಬರುವುದನ್ನು ಮನೆಯಮಗ ಊಟಮಾಡುವುದಕ್ಕೆ ಹೋಲಿಸಿದ್ದಾರೆ.
ಒಂದುಬಾರಿ ನೆರೆ ಬಂದಾಗ ಪತ್ರಕರ್ತ ಹೊಳೆಸಾಲಿನ ಒಂದು ಹಳ್ಳಿಯ ರೈತನಿಗೆ ಏನು ಮಾಡುವಿರಿ ಇಷ್ಟು ನಷ್ಟವಾಯಿತಲ್ಲ? ಎಂದು ಕೇಳಿದಾಗ ಆ ರೈತ “ಹೊಳಿಗೆ ಹೆದರಿದರ ಇಲ್ಲೇ ಯಾಕ ಇರ್ತಿದ್ವಿ? ಏನು ಆಗಿಲ್ಲಾ, ಎಲ್ಲಾ ಸ್ವಚ್ ಆತ್ ಹೂಗ್ ಮತ್ತ ಬೆಳಿತವಿ ನೀವು ಮನಿಗೆ ಹೋಗಬಹುದು” ಆಗ ಪತ್ರಕರ್ತ ನಿಮ್ಮ ಹೊಳಿಸಾಲ್ ಮಂದಿ ಸೊಕ್ ಯಾವಾಗೂ ಮುರಿಯೋದಿಲ್ಲ ಅಂತಾ ಹೀಲಿದಕ್ಕೆ ಆರೈತ “ಬೆಟ್ಟದಾಮೇಲೊಂದು ಮನೆಯಮಾಡಿ ಎಂದು ಅಕ್ಕಮಹಾದೇವೆಯ ವಚನ ಹೇಳುತ್ತಾರೆ” ಹೀಗೆ ನೀರು ಎಂದರೆ ಹೆದರಿಕೆ ಅಲ್ಲ ಅದು ಧೈರ್ಯ.
ಆದರೆ ಪ್ರವಾಹ ಮತ್ತು ಜನಜೀವನ ನಷ್ಟದಬಗ್ಗೆ ಏನು ಹೇಳುತ್ತೀಯಾ ಎಂದು ನೀವು ಕೇಳಬಹುದು. ನಾನು ಹೇಳುವುದಿಷ್ಟೇ, ಮನೆಯನ್ನು ಸುಟ್ಟುಹಾಕುವ ಬೆಂಕಿಯಲ್ಲಿ ಅನ್ನ ಬೇಯಿಸುವ ಸಾಮರ್ಥ್ಯ ಇರುತ್ತದೆ ನಾವು ಬರಿ ಒಂದನ್ನು ಮಾತ್ರ ಒಪ್ಪಿಕೊಳ್ಳಲುಸಾಧ್ಯವಿಲ್ಲ.
ಮಳೆ ಮತ್ತು ನೀರಿನ ಬಗ್ಗೆ ಎಷ್ಟು ಬರೆದರೂ ಮುಗಿಯದು; ಕೊನೆಯದಾಗಿ ಜಲಚಕ್ರದ ಒಂದು ಜಾನಪದ ಬಾಲಗೀತೆಯ ಸೇರಿಸಿ ಈ ಲೇಖನ ಮುಗಿಸುತ್ತೇನೆ.
ಜಲಚಕ್ರ
ಮಳೆಯು ಬಂತಲ್ಲ ನನ್ನ ಅಂಗಿ ತೊಯ್ತಲ್ಲ
ಜಲಚಕ್ರದ ಬಗ್ಗೆ ಹೇಳಿದ ಪಾಠ ನನಗೆ ತಿಳೀತಲ್ಲ
ನೀರು ಕಾದು ಆವೆಯಾಗಿ
ಮೇಲೆ ಹೋಗಿ ತಂಪಾಗಿ
ಭೂಮಿಗೆ ಬರುವುದು ಮಳೆಯಾಗಿ
ಲಚ್ಚಿಯ ಮೆಚ್ಚಿನ ದೋಣಿಯ ಮಾಡಿ
ನೀರಲಿ ಆಡುವೆ ಹಾಯಾಗಿ
ಹಿಂಗಾರು ಮುಂಗಾರು ಮಾರುತಗಳು
ಬೀಸುವ ರಭಸಕ್ಕೆ ಮೋಡಗಳು
ಬೆಳೆಗಳ ಮೇಲೆ ಮಳೆಯನ್ನು ಸುರಿಸಿ
ಭೂಮಿಯ ಒಡಲಿಗೆ ತಂಪೂಣಿಸಿ
ರೈತರ ಜೀವನ ಆಯಿತು ಪಾವನ
ಎನ್ನುತ ನಾವು ಕೂಣಿಯೋಣ