Post

ನಾನು ಮತ್ತು ಗಾಂಧಿ

       ಗಾಂಧೀಜಿಯವರ ಬಗ್ಗೆ ನನ್ನ ಮೊದಲ ನೆನಪನ್ನು ಹೇಳಬೇಕೆಂದರೆ, ನಾನು ಆರು ವರ್ಷದವನಿದ್ದಾಗ ಶಾಲೆಯಲ್ಲಿ ಗಾಂಧಿಜಯಂತಿ ಯನ್ನು ಆಚರಿಸಿದ್ದು ಮತ್ತು ಅದೇದಿನ ಮನೆಗೆ ಬಂದು ೨ರೂಪಾಯಿಯ ಹಾಲಿನ ಪೇಡಾ ತಂದು ನಾನು ಮನೆಯಲ್ಲಿ ಕೂಡಾ ಆಚರಿಸಿ ಖುಷಿಪಟ್ಟಿದ್ದು. ನಂತರ ಬೆಳೆಯುವಾಗ ಬರಿ ಗಾಂಧೀಜಿಯ ಬಗ್ಗೆ ನಕಾರಾತ್ಮಕ ಮಾತುಗಳನ್ನೇ ಕೇಳಿದ್ದೇನೆ, ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿಯನ್ನು ತೊರಿಸುವರೀತಿಯ ಹೇಳಲಾರೆ.

     ಈಗ ಸ್ನಾತಕೋತ್ತರ ಮಾಡುತ್ತಿರುವಾಗ “ಯುವಸಮೂದಾಯಕ್ಕೆ ಗಾಂಧಿ”; ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಮುರುದಿನಗಳ ಈ ಕಾರ್ಯಾಗಾರದಲ್ಲಿ ನಾನು, ಒಂದು ಮುಕ್ತ ಮನಸ್ಸಿನಿಂದ ಪಾಲ್ಗೊಂಡ ಕಾರಣ. ನನಗೆ ಒಬ್ಬ ವ್ಯಕ್ತಿ ಹೇಗೆ ಬದಲಾವಣೆ ತರಬಹುದು ಎಂದು ತಿಳಿಯಿತು; ಹಾಗು ಒಬ್ಬ ವ್ಯಕ್ತಿಯ ತತ್ವಗಳು ದಶಕಗಳನಂತರವೂ ಹೇಗೆ ಪ್ರಸ್ತುತ ಎಂದು ತಿಳಿದೇ. ಈ ಕಾರ್ಯಾಗಾರದಲ್ಲಿ ಗಾಂಧೀಜಿಯ ಸಿನಿಮಾ, ಅವರ ವಿಚಾರಗಳು, ಅಷ್ಟೇಅಲ್ಲದೆ ಇನ್ನು ಹಲವು ವಿಚಾರಗಳಬಗ್ಗೆ ತಿಳಿದೇ. ನಮಗೆ ನಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಗಾಂಧಿಭವನದಲ್ಲಿ ಒಂದು ಒಳ್ಳೆಯ ವೇದಿಕೆ ಸಿಕ್ಕಿತ್ತು. ಕಾರ್ಯಾಗಾರದಲ್ಲಿ ಹಲವು ಪುಸ್ತಕಗಳನ್ನು ನೀಡಲಾಯಿತು, ನನಗೆ ಬರಿ ಪುಸ್ತಕಗಳನ್ನು ಸಂಗ್ರಹಮಾದಿಡುವ ಛಾಳಿ ಇಲ್ಲ ಅದಕ್ಕೆ ಒಂದೆರೆಡನ್ನು ಓದಿಮುಗಿಸಿದೆ. ಕೊನೆಗೆ ಕೆಲವು ಪುಸ್ತಕಗಳನ್ನು ವೆವಸ್ಥಾಪಕರಿಗೆ ಕೇಳಿ ನಮ್ಮ ತಾಯಿಯ ಶಾಲೆಗೆ ತಲುಪಿಸಿದ್ದು ಸಂತಸ ನೀಡಿತು.

     ನಾವು ಅವರಿವರು ಹೇಳಿದ್ದನ್ನು ಕೇಳದೆ ನಮ್ಮ ಸ್ವಂತ ದೃಷ್ಠಿಯಿಂದ ಒಬ್ಬರನ್ನು ಅಳೆಯುವ ವಿಧಾನ ಕಲಿಯಬೇಕಾಗಿದೆ. ಒಟ್ಟಾರೆಯಾಗಿ ಈ ಕಾರ್ಯಗಾರದಿಂದ ನನಗೆ ಗಾಂಧೀಜಿಯವರ ವ್ಯಕ್ತಿತ್ವದ ಪರಿಚಯ, ಪುಸ್ತಕ, ಯುವಸಮುದಾಯದ ಪರಿಚಯ ಮತ್ತು ಆತ್ಮಾಭಿವೃದ್ಧಿಆಯಿತು.

This post is licensed under CC BY 4.0 by the author.